ಬಾಂಗ್ಲಾದೇಶದಲ್ಲಿ ವ್ಯಾಪಕ ಹಿಂಸಾಚಾರದಿಂದಾಗಿ ಶೇಖ್ ಹಸೀನಾ ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಿ ದೇಶವನ್ನು ತೊರೆದಿದ್ದರು. ಈ ಬಗ್ಗೆ ಖ್ಯಾತ ಲೇಖಕಿ ತಸ್ಲೀಮಾ ನಸ್ರೀನ್ ವ್ಯಂಗ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.
ವಿವಾದಾತ್ಮಕ ಲೇಖಕಿಯಾಗಿರುವ ತಸ್ಲೀಮಾ ನಸ್ರೀನ್, ಇಸ್ಲಾಂಮಿಸ್ಟ್ ಗಳನ್ನು ಮೆಚ್ಚಿಸಲು ಶೇಖ್ ಹಸೀನಾ ನನ್ನನ್ನು ಬಾಂಗ್ಲಾದೇಶದಿಂದ ಹೊರ ಹಾಕಿದ್ದರು. ಈಗ ಅದೇ ಜನರು ವಿದ್ಯಾರ್ಥಿ ಚಳವಳಿ ಮೂಲಕ ಶೇಖ್ ಹಸೀನಾ ಅವರನ್ನು ದೇಶ ತೊರೆಯುವಂತೆ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾನು 1999ರಲ್ಲಿ ಅನಾರೋಗ್ಯದಿಂದ ಬಳಲುತ್ತಿದ್ದ ನನ್ನ ತಾಯಿಯನ್ನು ನೋಡಲು ಬಾಂಗ್ಲಾಕ್ಕೆ ತೆರಳಿದ್ದೆ. ಆಗ ಹಸೀನಾ ಇಸ್ಲಾಮಿಸ್ಟ್ಗಳನ್ನು ಮೆಚ್ಚಿಸಲು ನನ್ನ ಹೊರ ಹಾಕಿದರು. ಈಗ ಅದೇ ಜನರು ಅವರನ್ನು ಹೊರ ಹಾಕಿದ್ದಾರೆ ಎಂದು ವ್ಯಂಗ್ಯವಾಡಿದ್ದಾರೆ.