Breaking:

ತಾಯಿಯ ಆಸ್ತಿಯನ್ನು ಕಬಳಿಸಿ ಊಟ ಹಾಕದ ಮಕ್ಕಳು; ಠಾಣೆಯ ಮೆಟ್ಟಿಲೇರಿದ ವೃದ್ಧೆ ತಾಯಿ

ತಾಯಿಯ ಅಸ್ತಿಯನ್ನು ಕಬಳಿಸಿ, ಸರಿಯಾಗಿ ಊಟ ನೀಡದೆ ರಾಕ್ಷಸಿ ವರ್ತನೆಯನ್ನು ತೋರಿರುವ ಮಕ್ಕಳ ವಿರುದ್ಧ ವೃದ್ಧೆ ತಾಯಿಯೋರ್ವಳು ನಾಲ್ವರು ಪುತ್ರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.

ತೆಲಂಗಾಣದ ಕರೀಂನಗರ ಜಿಲ್ಲೆಯ ತಿಮ್ಮಾಪುರ ಮಂಡಲದ ಅಳುಗುನೂರು ಗ್ರಾಮದಲ್ಲಿ ನಡೆದಿದ್ದು, ಮಕ್ಕಳು ಸರಿಯಾಗಿ ಊಟ ಕೊಡುತ್ತಿಲ್ಲವೆಂದು ವೃದ್ಧ ತಾಯಿ ಪುತ್ರರ ವಿರುದ್ಧ ಠಾಣೆ ಮೆಟ್ಟಿಲೇರಿದ್ದಾರೆ.

ನನಗೆ ನಾಲ್ವರು ಪುತ್ರರಿದ್ದು ಅವರಿಗೆಲ್ಲಾ ಮದುವೆ ಮಾಡಿ, ನನ್ನ ಆಸ್ತಿಯನ್ನೆಲ್ಲಾ ಅವರ ಹೆಸರಿಗೆ ಬರೆದುಕೊಟ್ಟಿದ್ದೇನೆ. ಆದರೆ ಅವರು ನನ್ನನ್ನು ಪುಟ್ಟ ಗುಡಿಸಲಿನಲ್ಲಿಟ್ಟು ಸರಿಯಾಗಿ ಊಟ ಕೂಡಾ ನೀಡುತ್ತಿಲ್ಲ ಎಂದು ಪೊಲೀಸರಿಗೆ ದೂರನ್ನು ನೀಡಿದ್ದಾರೆ.

ಈ ಕುರಿತ ಪೋಸ್ಟ್ ಒಂದನ್ನು Telugu Scribe ಹೆಸರಿನ ಎಕ್ಸ್ ಖಾತೆಯಲ್ಲಿ ಹಂಚಿಕೊಳ್ಳಲಾಗಿದ್ದು, ‘ಆಸ್ತಿಯನ್ನೆಲ್ಲಾ ಕಬಳಿಸಿ ಇದೀಗ ಊಟವನ್ನು ಕೊಡದೆ ಕಷ್ಟ ಕೊಡುತ್ತಿರುವ ನಾಲ್ವರು ಪುತ್ರರ ವಿರುದ್ಧ ಪೊಲೀಸ್ ಠಾಣೆ ಮೆಟ್ಟಿಲೇರಿದ ವೃದ್ಧೆ’ ಎಂಬ ಶೀರ್ಷಿಕೆಯನ್ನು ಬರೆದುಕೊಳ್ಳಲಾಗಿದೆ.

ವೈರಲ್ ವಿಡಿಯೋದಲ್ಲಿ ಅಸಹಾಯಕ ಸ್ಥಿತಿಯಲ್ಲಿದ್ದ ವೃದ್ಧೆ ತಾಯಿ ಠಾಣೆಗೆ ಬಂದು ಸರಿಯಾಗಿ ಊಟ ಕೊಡದ ಪುತ್ರರ ವಿರುದ್ಧ ದೂರು ನೀಡುತ್ತಿರುವ ದೃಶ್ಯವನ್ನು ಕಾಣಬಹುದು.

Share this article

ಟಾಪ್ ನ್ಯೂಸ್