ವಿದ್ಯಾರ್ಥಿಯೋರ್ವ ಗಡ್ಡ ಬಿಟ್ಟುಕೊಂಡು ಕಾಲೇಜಿಗೆ ಬಂದಿದ್ದಕ್ಕೆ ಆತನನ್ನು ಕಾಲೇಜಿನಿಂದ ಪ್ರಾಂಶುಪಾಲರು ಹೊರಹಾಕಿರುವ ಘಟನೆ ಉತ್ತರಪ್ರದೇಶದ ಬರೇಲಿಯಲ್ಲಿ ನಡೆದಿದೆ.
ಹೋಬಿಗಂಜ್‌ನ ಆಜಾದ್ ನೌರಂಗ್ ಇಂಟರ್ ಕಾಲೇಜಿನ ವಿದ್ಯಾರ್ಥಿ ಫರ್ಮಾನ್ ಅಲಿಯನ್ನು ಪ್ರಾಂಶುಪಾಲರು ಗಡ್ಡ ಬಿಟ್ಟುಕೊಂಡಿದ್ದಕ್ಕೆ ಕಾಲೇಜಿನಿಂದ ಹೊರ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ.
ವರದಿಗಳ ಪ್ರಕಾರ, ಉಚ್ಚಾಟಿತ ವಿದ್ಯಾರ್ಥಿಯ ಹಿರಿಯ ಸಹೋದರ ಜೀಶನ್ ಅಲಿ ಮುಖ್ಯಮಂತ್ರಿ ಮತ್ತು ಜಿಲ್ಲಾಧಿಕಾರಿಗಳಿಗೆ ಔಪಚಾರಿಕ ದೂರುಗಳನ್ನು ಸಲ್ಲಿಸಿದ್ದಾರೆ. ಪ್ರಾಂಶುಪಾಲರು ಫರ್ಮಾನ್‌ಗೆ ಕಾಲೇಜಿಗೆ ಪ್ರವೇಶ ನಿರಾಕರಿಸಿರುವುದನ್ನು ತೋರಿಸುವ ವೀಡಿಯೋ ವ್ಯಾಪಕವಾಗಿ ಪ್ರಸಾರವಾಗಿದ್ದು, ಕ್ರಮಕ್ಕಾಗಿ ವ್ಯಾಪಕ ಆಗ್ರಹ ವ್ಯಕ್ತವಾಗಿದೆ.
ಪ್ರಾಂಶುಪಾಲರು, ವಿದ್ಯಾರ್ಥಿಯನ್ನು ಜಾತಿ ಆಧಾರದ ಮೇಲೆ ಅಂದರೆ ‘ಇದು ಮದರಸಾ ಅಲ್ಲ, ಕಾಲೇಜು’ ಎಂದು ನಿಂದಿಸಿರುವುದು ತೀವ್ರ ಆಕ್ರೋಶಕ್ಕೆ ಕಾರಣವಾಗಿದ್ದು, ಈ ಪ್ರಕರಣದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ.
ಇದೀಗ ವಿದ್ಯಾರ್ಥಿಯ ಹಿರಿಯ ಸಹೋದರ ಪ್ರಾಂಶುಪಾಲರ ವಿರುದ್ಧ ಬರೇಲಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಮತ್ತು ಮುಖ್ಯಮಂತ್ರಿ ಪೋರ್ಟಲ್‌ಗೆ ದೂರು ನೀಡಿದ್ದಾರೆ.