Breaking:

ಉಪ್ಪಿನಂಗಡಿ; ನೀರಿನಲ್ಲಿ ಮುಳುಗಿ ಬಾಲಕ ಮೃತ್ಯು

ಉಪ್ಪಿನಂಗಡಿ; ನೀರಿನಲ್ಲಿ ಮುಳುಗಿ ವಿದ್ಯಾರ್ಥಿಯೋರ್ವ ಮೃತಪಟ್ಟ ಘಟನೆ ಉಪ್ಪಿನಂಗಡಿಯ ತುರ್ಕಳಿಕೆ ಎಂಬಲ್ಲಿ ನಡೆದಿದೆ.

ಮುಸ್ತಫಾ ಎಂಬವರ ಮಗ ಮೊಹಮ್ಮದ್ ತಂಝೀರ್(14) ಮೃತ ಬಾಲಕ. ಮಧ್ಯಾಹ್ನ ಶಾಲೆಯಿಂದ ಸ್ನೇಹಿತರ ಜೊತೆ ಈಜಲು ತೆರಳಿ ಬಾಲಕ ಅವಘಢಕ್ಕೆ ಸಿಲುಕಿ ಮೃತಪಟ್ಟಿದ್ದಾನೆ.

ಮುಸ್ತಫಾ ಅವರ ತಾಯಿ ಇತ್ತೀಚೆಗೆ ನಿಧನ ಹೊಂದಿದ್ದರು. ಆ ಬಳಿಕ‌ ಮುಸ್ತಫಾ ಅವರ ಸಹೋದರನ ಪತ್ನಿ ಅನಾರೋಗ್ಯದಿಂದ ನಿಧನರಾಗಿದ್ದರು. ಇದರ ಬೆನ್ನಲ್ಲೇ ತಂಝೀರ್ ಆಕಸ್ಮಿಕವಾಗಿ ನಿಧನರಾಗಿದ್ದು, ಕುಟುಂಬ ಮತ್ತಷ್ಟು ಆಘಾತಕ್ಕೆ ಒಳಗಾಗಿದೆ.

 

 

 

Share this article

ಟಾಪ್ ನ್ಯೂಸ್