ಬಾಂಗ್ಲಾದೇಶದಲ್ಲಿನ ಮೀಸಲಾತಿ ವಿರೋಧಿಸಿ ನಡೆಯುತ್ತಿರುವ ಪ್ರತಿಭಟನೆಗೆ ಬೆಂಬಲ ಸೂಚಿಸಿ ಯುಎಇಯಲ್ಲಿ ಪ್ರತಿಭಟನೆ ನಡೆಸಿದ 57 ಬಾಂಗ್ಲಾದೇಶಿಗರನ್ನು ಯುಎಇ ನ್ಯಾಯಾಲಯ 10 ವರ್ಷ ಜೈಲಿಗೆ ತಳ್ಳಿದೆ.
ಬಾಂಗ್ಲಾದೇಶ ಸರ್ಕಾರವು ತೆಗೆದುಕೊಂಡ ಮಿಸಲಾತಿ ನಿರ್ಧಾರಗಳನ್ನು ವಿರೋಧಿಸಿ ಯುಎಇಯ ಹಲವಾರು ಬೀದಿಗಳಲ್ಲಿ ಬಾಂಗ್ಲಾದೇಶಿಗಳು ಪ್ರತಿಭಟನಾ ಜಾಥಾವನ್ನು ನಡೆಸಿದ್ದರು.
ಯುಎಇಯಲ್ಲಿ ಬಾಂಗ್ಲಾದೇಶದ ವಲಸಿಗರು ಅತೀ ಹೆಚ್ಚು ಸಂಖ್ಯೆಯಲ್ಲಿದ್ದು, ಅಲ್ಲಿ ಕಡಿಮೆ ಸಂಬಳಕ್ಕೆ ಕೆಲಸ ಮಾಡುತ್ತಾರೆ. ಇದೀಗ ಬಾಂಗ್ಲಾದೇಶದ ವಿರುದ್ದ ಯುಎಇಲ್ಲಿ ಪ್ರತಿಭಟನೆ ನಡೆಸಿದ್ದಕ್ಕೆ ಅಬುಧಾಬಿ ಫೆಡರಲ್ ಮೇಲ್ಮನವಿ ನ್ಯಾಯಾಲಯವು 53 ಬಾಂಗ್ಲಾದೇಶದ ಪ್ರಜೆಗಳಿಗೆ 10 ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಿದೆ.
ವರದಿಯ ಪ್ರಕಾರ, ಶಿಕ್ಷೆಯ ಅವಧಿ ಮುಗಿದ ನಂತರ ಈ ವ್ಯಕ್ತಿಗಳನ್ನು ಯುಎಇಯಿಂದ ಗಡಿಪಾರು ಮಾಡುವಂತೆಯೂ ನ್ಯಾಯಾಲಯ ಆದೇಶಿಸಿದೆ.