ಉಡುಪಿ ನಗರದಲ್ಲಿ ಹಾಡ ಹಗಲಲ್ಲೇ ಕಾರಿನೊಳಗೆ ಅನೈತಿಕ ಚಟುವಟಿಕೆ ನಡೆಸುತ್ತಿದ್ದ ಜೋಡಿಯನ್ನು ಸಾರ್ವಜನಿಕರು ರೆಡ್ ಹ್ಯಾಂಡ್ ಆಗಿ ಹಿಡಿದಿದ್ದು, ಈ ವೇಳೆ ಜೋಡಿ ಪರಾರಿಯಾಗಿದ್ದಾರೆ.
ಉಡುಪಿಯ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಎದುರು, ಕಾರು ನಿಲುಗಡೆಗೊಳಿಸಿತ್ತು. ಕಾರಿನ ಗಾಜಿಗೆ ಒಳಭಾಗದಿಂದ ಕಪ್ಪು ಬಣ್ಣದ ಪರದೆ ಹಾಕಿಕೊಂಡಿತ್ತು. ನಿಂತಿದ್ದ ಕಾರನ್ನು ಅಲುಗಾಟ ಕಂಡು ಸಂಶಯಗೊಂಡ ಸ್ಥಳಿಯರು ಇಣುಕಿ ನೋಡಿದಾಗ ಅನೈತಿಕ ಕೃತ್ಯ ಬೆಳಕಿಗೆ ಬಂದಿದೆ.
ಈ ವೇಳೆ ಯುವಕ ಮತ್ತು ಯುವತಿಯ ಕಾರನ್ನು ಸ್ಥಳದಲ್ಲಿ ಬಿಟ್ಟು ಪರಾರಿಯಾಗಿದ್ದಾರೆ.
ಕಾರು ಕಳೆದ ಒಂದು ವಾರದಿಂದ ಅನುಮಾನಸ್ಪದವಾಗಿ ಅದೇ ಜಾಗದಲ್ಲಿ ನಿಲ್ಲುತ್ತಿತ್ತು ಎಂದು ತಿಳಿದು ಬಂದಿದೆ.