ಗಾಂಜಾ ನಶೆಯಲ್ಲಿ ಬಂದ ಹತ್ತಾರು ಯುವಕರ ಗ್ಯಾಂಗ್‌ವೊಂದು ತಲ್ವಾರ್ ಝಳಪಿಸಿದ ಘಟನೆ ಉಡುಪಿಯ ಕುಂದಾಪುರ ಸಮೀಪದ ವಕ್ವಾಡಿಯಲ್ಲಿ ನಡೆದಿದೆ.
ನಿನ್ನೆ ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ನಾಲ್ಕೈದು ಜನರಿಗೆ ಗಂಭೀರವಾಗಿ ಗಾಯವಾಗಿದೆ.
ಘಟನೆಗೆ ಸಂಬಂಧಿಸಿ ವಕ್ವಾಡಿಯ ಆದರ್ಶ(33), ಎಡ್ವರ್ಡ್(35), ಗಣೇಶ್ ಕುಂಭಾಶಿ(28), ಗೋವರ್ಧನ್(32) ಎಂಬವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಭಾಗಿಯಾಗಿದ್ದ ಉಳಿದ ಆರೋಪಿಗಳು ಪರಾರಿ ಆಗಿದ್ದು, ಪೊಲೀಸ್‌ರು ಹುಡುಕಾಟ ನಡೆಸಿದ್ದಾರೆ.
ವಕ್ವಾಡಿಯಲ್ಲಿ ಗಾಂಜಾ ನಶೆಯಲ್ಲಿ ಮಹಿಳೆಯನ್ನು ಅಡ್ಡಗಟ್ಟಿ ದಾಂಧಲೆ ಮಾಡಿದ್ದಾರೆ. ಬಳಿಕ ಪಕ್ಕದಲ್ಲಿದ್ದ ಆಟೋ, ಬೈಕ್ ಮೇಲು ತಲ್ವಾರ್ ಬೀಸಿ ಹಾನಿ ಮಾಡಿದ್ದಾರೆ. ಇದಲ್ಲದೆ ಪಕ್ಕದಲ್ಲಿ ನಿಂತಿದ್ದ ಅಶೋಕ್ ಮತ್ತು ಚಂದ್ರಶೇಖರ್ ಎಂಬುವವರ ಮೇಲೆ ದಾಳಿ ಮಾಡಿದ್ದಾರೆ. ಇದರಿಂದ ಇಬ್ಬರು ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.