Breaking:

ಟ್ರಂಪ್ ಗೆ ಗುಂಡೇಟು ಘಟನೆಯನ್ನು ರಿಕ್ರಿಯೇಟ್ ಮಾಡಿದ ಉಗಾಂಡದ ಮಕ್ಕಳು!

ಅಮೆರಿಕಾ ಮಾಜಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಮೇಲೆ ಇತ್ತೀಚೆಗೆ ನಡೆದ ಗುಂಡಿನ ದಾಳಿ ವಿಶ್ವದಾದ್ಯಂತ ಭಾರೀ ಸುದ್ದಿಯಾಗಿತ್ತು. ಇದೀಗ  ಉಗಾಂಡದ ಕೆಲವು ಮಕ್ಕಳು ಮನರಂಜನೆಗಾಗಿ ಮರದ ಆಟಿಕೆ ಬಂದೂಕು ಮತ್ತು ಪ್ಲಾಸ್ಟಿಕ್ ಪೆಟ್ಟಿಗೆಗಳನ್ನು ಬಳಸಿ ಘಟನೆ ಮರುಸೃಷ್ಟಿಸಿದ್ದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್​ ಆಗಿದೆ.

ಬುಲೆಟ್ ತಗುಲಿದಾಗ ಟ್ರಂಪ್ ಅವರ ಮುಖಭಾವ, ಕೆಳಗೆ ಬಾಗಿದ ದೃಶ್ಯ, ಗುಪ್ತದಳದ ಸಿಬ್ಬಂದಿ ತಕ್ಷಣ ಅವರನ್ನು ಸುತ್ತುವರಿದು ಸುರಕ್ಷಿತ ಪ್ರದೇಶಕ್ಕೆ ಕರೆದೊಯ್ದ ಘಟನೆಗಳನ್ನು ಉಗಾಂಡಾ ಮಕ್ಕಳು ಹಾಗೆಯೇ ಅಭಿನಯಿಸಿದ್ದಾರೆ.

ಈ ಗುಂಪಿನಲ್ಲಿ ಒಬ್ಬ ಹುಡುಗ ಮೈಕ್ ಮುಂದೆ ನಿಂತು ಮಾತನಾಡುತ್ತಿದ್ದಾಗ ಇದ್ದಕ್ಕಿದ್ದಂತೆ ಗುಂಡಿನ ಸದ್ದು ಕೇಳಿಸಿದೆ. ಅವರ ಪಕ್ಕದಲ್ಲಿದ್ದ ಉಳಿದ ಮಕ್ಕಳು ರಹಸ್ಯ ಸೇವಾ ಸಿಬ್ಬಂದಿಯಾಗಿ ಬದಲಾದರು. ಇದೇ ಹುಡುಗ ಶೂಟಿಂಗ್ ವೇಳೆ ಟ್ರಂಪ್ ವೇದಿಕೆಯಿಂದ ಕೆಳಗಿಳಿದು ಮುಷ್ಟಿ ಬಿಗಿದುಕೊಂಡು ಹೋರಾಟ ಮಾಡಿ ಎಂದು ಕೂಗಿದಂತೆಯೇ ಮಾಡಿ ಗಮನ ಸೆಳೆದಿದ್ದಾನೆ.

ಸದ್ಯ ಈ ರಿಕ್ರಿಯೇಶನ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಈ ಬಗ್ಗೆ ವಿಭಿನ್ನ ಅಭಿಪ್ರಾಯಗಳು ಕೇಳಿಬರುತ್ತಿವೆ.

ಇಂತಹ ಪ್ರವೃತ್ತಿಯು ಮಕ್ಕಳ ಮನಸ್ಥಿತಿಯ ಮೇಲೆ ನಕಾರಾತ್ಮಕ ಪರಿಣಾಮ ಬೀರಬಹುದು ಎಂದು ಕೆಲವರು ಕಳವಳ ವ್ಯಕ್ತಪಡಿಸಿದ್ದಾರೆ.

Share this article

ಟಾಪ್ ನ್ಯೂಸ್