ಉಪ್ಪಿನಂಗಡಿ: ನಾಲ್ವರ ತಂಡವೊಂದು ಯುವಕನಿಗೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹಲ್ಲೆ ಬಗ್ಗೆ ತಣ್ಣೀರುಪಂಥ ಗ್ರಾಮದ ಬೋವು ನಿವಾಸಿ ಮಹಮ್ಮದ್ ಶಮ್ಮಾಝ್ ಎಂಬವರು ದೂರು ನೀಡಿದ್ದಾರೆ.
ದಕ್ಷಿಣಕಾಶಿ ಅಂಬುಲೆನ್ಸ್ ಚಾಲಕ ಸೇರಿ 4 ಮಂದಿ “ಮುಖಕ್ಕೆ, ಬೆನ್ನಿಗೆ ಹೊಡೆದು, ಕಾಲಿನಿಂದ ತುಳಿದು, ಕೊಲ್ಲುವ ಬೆದರಿಕೆ ಒಡ್ಡಿದ್ದಾರೆ” ಎಂದು ದೂರಿನಲ್ಲಿ ಆರೋಪಿಸಿದ್ದಾರೆ.
ಅದರಂತೆ ಉಪ್ಪಿನಂಗಡಿ ಪೊಲೀಸರು 4 ಮಂದಿಯ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ.