ಉಪ್ಪಿನಂಗಡಿ: ಪತ್ನಿಗೆ ಚೂರಿಯಿಂದ ಇರಿದು ಆರೋಪಿಯೋರ್ವ ಪರಾರಿಯಾಗಿದ್ಸು, ಆರೋಪಿಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾ
ಬೆಳ್ತಂಗಡಿ ತಾಲೂಕಿನ ಕಣಿಯೂರು ಗ್ರಾಮದ ಜೋರು ಕಟ್ಟೆಯ ನಿವಾಸಿ ಮುಹಮ್ಮದ್ ಅವರ ಪುತ್ರಿ ಸಜರಾ (40) ಇರಿತಕ್ಕೊಳಗಾದವರು. ಈಕೆಯ ಪತಿ ಮಡಂತ್ಯಾರು ಸಮೀಪದ ಕೊಲತ್ತಬೈಲು ಮಾಲಾಡಿ ನಿವಾಸಿ ಹಕೀಂ ಹಲ್ಲೆ ಆರೋಪಿ.
ಹಕೀಂ ಮತ್ತು ಸಜರಾ ವಿವಾಹ 15 ವರ್ಷಗಳ ಹಿಂದೆ ನಡೆದಿದ್ದು, ಮದುವೆಯಾದ ಕೆಲವು ವರ್ಷಗಳ ಬಳಿಕ ಹಕೀಂ ಪತ್ನಿಗೆ ಹಿಂಸೆ ನೀಡಲು ಆರಂಭಿಸಿದ್ದ. ಈ ಹಿನ್ನೆಲೆಯಲ್ಲಿ ಸಜರಾ ಮೂರು ವರ್ಷದಿಂದ ಜೋರುಕಟ್ಟೆಯಲ್ಲಿರುವ ತನ್ನ ತವರು ಮನೆಗೆ ಬಂದು ಮಕ್ಕಳೊಂದಿಗೆ ನೆಲೆಸಿದ್ದರು. ಶುಕ್ರವಾರ ಮಧ್ಯಾಹ್ನ ಚೂರಿ ಹಿಡಿದುಕೊಂಡು ಬಂದ ಹಕೀಂ ಏಕಾಏಕಿ ಸಜರಾ ಅವರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.