ಯು.ಟಿ.ಫರ್ಝಾನಾ ಅಶ್ರಫ್ ಅವರನ್ನು ಬೆಂಗಳೂರು ಸೆಂಟ್ರಲ್ ಯೂನಿವರ್ಸಿಟಿ ಸಿಂಡಿಕೇಟ್ ಸದಸ್ಯೆಯಾಗಿ ನಾಮ ನಿರ್ದೇಶನ ಮಾಡಿರುವುದು ಹಲವು ಕಾಂಗ್ರೆಸ್ ಕಾರ್ಯಕರ್ತರ ಅಸಮಾಧಾನಕ್ಕೆ ಕಾರಣವಾಗಿದೆ.
ಈ ಕುರಿತು ಕಾಂಗ್ರೆಸ್ ಮುಖಂಡೆಯರಾದ ಕವಿತಾ ರೆಡ್ಡಿ ಹಾಗೂ ರೇಖಾ ಶ್ರೀನಿವಾಸ್ ಬಹಿರಂಗವಾಗಿಯೇ ಅಸಮಧಾನ ತೋಡಿಕೊಂಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಕವಿತಾ ರೆಡ್ಡಿ, ಪ್ರತಿದಿನ ಬಿಜೆಪಿಯ ದಾಳಿಯನ್ನು ಸಹಿಸಿಕೊಳ್ಳುತ್ತಾ ಪಕ್ಷಕ್ಕಾಗಿ ದುಡಿಯುತ್ತಿರುವ ಮಹಿಳೆ ರೇಖಾ ಶ್ರೀನಿವಾಸ್ ಅವರಿಗೆ ಇದರಿಂದ ಭಾರೀ ಅನ್ಯಾಯವಾಗಿದೆ ಎಂದಿದ್ದರೆ, ರೇಖಾ ಶ್ರೀನಿವಾಸ್ ಅವರು ಪ್ರತಿಕ್ರಿಯಿಸಿ, ಪಕ್ಷ ಕಟ್ಟಿದ ಸಾವಿರಾರು ಹೆಣ್ಣು ಮಕ್ಕಳು ಇದ್ದಾರೆ. ಅವರೆಲ್ಲರನ್ನೂ ಬಿಟ್ಟು ಕುಮಾರಣ್ಣನ ಪರ ಪ್ರಚಾರ ಮಾಡಿದ ಮಹಿಳೆಗೆ ಸ್ಥಾನ ನೀಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ಇದಲ್ಲದೆ ಪ್ರಜಾವಾಣಿಯ ಚ.ಹ.ರಘುನಾಥ್ ಅವರನ್ನು ಬಳ್ಳಾರಿ ಯೂನಿವರ್ಸಿಟಿಗೆ, ನಟರಾಜ್ ಹುಳಿಯಾರ್ ಮತ್ತು ಕೆ.ಷರೀಫಾ ಅವರನ್ನೂ ಬೇರೆ ಬೇರೆ ವಿಶ್ವವಿದ್ಯಾಲಯಗಳಿಗೆ ನಾಮನಿರ್ದೇಶನ ಮಾಡಲಾಗಿದೆ.