ಉತ್ತರ ಕನ್ನಡ ಜಿಲ್ಲೆಯಲ್ಲಿ ಇಂದು ಎನ್‌ಐಎ ಅಧಿಕಾರಿಗಳು ದಾಳಿ ನಡೆಸಿದ್ದು, ಕಾರವಾರ ತಾಲೂಕಿನ ಮುದಗಾ, ತೋಡುರು, ಕುಮಟಾ ಹನೇಹಳ್ಳಿ ಗ್ರಾಮದಲ್ಲಿ ಎನ್‌ಐಎ ದಾಳಿ ನಡೆದಿದೆ.
ನೌಕಾನೆಲೆಯ ಫೋಟೋ ರವಾನೆಯಾಗಿ ಗುಪ್ತ ಮಾಹಿತಿ ಸೋರಿಕೆಯಾಗಿರುವ ಹಿನ್ನೆಲೆ ಎನ್‌ಐಎ ಅಧಿಕಾರಿಗಳು ನೌಕಾನೆಲೆಯಲ್ಲಿರುವ ಮೂವರ ವಿಚಾರಣೆ ನಡೆಸಿದ್ದಾರೆ ಎಂದು ವರದಿಯಾಗಿದೆ.
2023ರಲ್ಲಿ ಹೈದರಾಬಾದ್‌ನಲ್ಲಿ ದೀಪಕ್ ಎಂಬಾತನನ್ನು ಎನ್‌ಐಎ ವಶಕ್ಕೆ ಪಡೆದುಕೊಂಡಿತ್ತು. ದೀಪಕ್ ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಮೂವರನ್ನು ವಶಕ್ಕೆ ಪಡೆಯಲಾಗಿದೆ ಎನ್ನಲಾಗಿದೆ.
ದೀಪಕ್ ವಿಚಾರಣೆ ವೇಳೆ ಮೂವರ ಹೆಸರು ಬೆಳಕಿಗೆ ಬಂದಿತ್ತು. ಸುನೀಲ್ ನಾಯ್ಕ್, ಅಕ್ಷಯ್ ನಾಯ್ಕ್,
ವೇತನ್ ತಾಂಡೇಲ್ ಬಗ್ಗೆ ದೀಪಕ್ ಮಾಹಿತಿ ನೀಡಿದ್ದ. ಅವರು ಕಾರವಾರ ಗ್ರಾಮೀಣ ಭಾಗದವರಾಗಿದ್ದು, ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಇವರ ವಿರುದ್ಧ ಗುಪ್ತ ಮಾಹಿತಿ ಸೋರಿಕೆ ಆರೋಪ ಹೊರಿಸಲಾಗಿದ್ದು ಮೂವರ ಮೊಬೈಲ್‌ಗಳನ್ನು ವಶಕ್ಕೆ ಪಡೆದು ಎನ್‌ಐಎ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದಾರೆ.