Breaking:

ಮುಖ್ಯಮಂತ್ರಿಗಳ ನಿವಾಸದ ಬಳಿ ಮಹಿಳೆಯೋರ್ವರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನ; ಸ್ಥಿತಿ ಗಂಭೀರ

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನಿವಾಸದ ಹೊರಗಡೆ ಮಹಿಳೆಯೊಬ್ಬರು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ.

ಯೋಗಿ ಆದಿತ್ಯನಾಥ್ ಅವರ ಜನತಾ ದರ್ಬಾರ್​ನಿಂದ ಹೊರಬಂದ ಕೂಡಲೇ ಮಹಿಳೆ ಗೌತಮಪಲ್ಲಿ ಪೊಲೀಸ್ ಠಾಣೆ ಪ್ರದೇಶದ ವಿಕ್ರಮಾದಿತ್ಯ ಮಾರ್ಗದ 19 ಬಿಡಿ ಜಂಕ್ಷನ್ ಬಳಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾರೆ ಎಂದು ವರದಿಗಳು ತಿಳಿಸಿವೆ.

ಆತ್ಮಹತ್ಯೆಗೆ ಯತ್ನಿಸಿದ ಮಹಿಳೆಯನ್ನು ಅಂಜಲಿ ಜಾತವ್​ ಎಂದು ಹೇಳಲಾಗಿದೆ.

ಪೊಲೀಸ್ ಸಿಬ್ಬಂದಿ ಬೆಂಕಿಯನ್ನು ಕಂಬಳಿ ಬಳಸಿ  ನಂದಿಸಿದ್ದಾರೆ. ಮಹಿಳೆಯನ್ನು ತ್ವರಿತವಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದದ್ದು, ಆಕೆಯ ಸ್ಥಿತಿ ಚಿಂತಾಜನಕವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಪೊಲೀಸರು ಬೆಂಕಿ ನಂದಿಸುವ ಹೊತ್ತಿಗೆ, ಮಹಿಳೆಗೆ 80% ಸುಟ್ಟ ಗಾಯಗಳಾಗಿದ್ದವು. ಅವಳನ್ನು ಆಸ್ಪತ್ರೆಗೆ ಸಾಗಿಸಲಾಗಿದೆ.

Share this article

ಟಾಪ್ ನ್ಯೂಸ್