Breaking:

ಶಾಲೆಗೆ ಜಮೀನು ಕೊಟ್ಟರೂ, ಎಸ್ ಡಿಎಂಸಿ ಅಧ್ಯಕ್ಷನನ್ನಾಗಿ ಮಾಡಿಲ್ಲ ಎಂದು ಶಾಲೆಗೆ ಬೀಗ ಜಡಿದ ಆಸಾಮಿ; ಮಕ್ಕಳು ಕಂಗಾಲು

ನಾನು ಶಾಲೆಗೆ ಜಮೀನು ಕೊಟ್ಟಿದ್ದೇನೆ, ಆದ್ದರಿಂದ ಸರ್ಕಾರಿ ಶಾಲೆಗೆ ತನ್ನನ್ನು ಶಾಶ್ವತವಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಿ ಮಾಡುವಂತೆ ಆಗ್ರಹಿಸಿ ವ್ಯಕ್ತಿಯೊಬ್ಬ ಶಾಲೆಗೆ ಬೀಗ ಜಡಿದಿದ್ದು, ಮಕ್ಕಳು ಶಾಲೆಯ ಹೊರಗೆ ಕುಳಿತ ವಿಚಿತ್ರ ಘಟನೆ ವಿಜಯಪುರದಲ್ಲಿ ನಡೆದಿದೆ‌.

ರಾಮನಗೌಡ ದೋರನಹಳ್ಳಿ ಎಂಬಾತ ತಾಳಿಕೋಟೆ ತಾಲೂಕಿನ ಬಳಗಾನೂರ ಕ್ರಾಸ್ ಬಳಿ ಇರುವ ಸರ್ಕಾರಿ ಪೂರ್ವ ಪ್ರಾಥಮಿಕ ಶಾಲೆಗೆ  ಬೀಗ ಜಡಿದಿದ್ದಾನೆ.

ಸರ್ಕಾರಿ ಶಾಲೆಗೆ ನಮ್ಮ ಕುಟುಂಬದಿಂದ 3 ಗುಂಟೆ ಭೂಮಿ ದಾನ ನೀಡಿದ್ದೇವೆ. ಹೀಗಾಗಿ ಈ ಶಾಲೆಗೆ ನಾನೇ ಶಾಶ್ವತವಾಗಿ ಎಸ್.ಡಿ.ಎಂ.ಸಿ. ಅಧ್ಯಕ್ಷನಾಗಬೇಕು ಎಂದು ಪಟ್ಟು ಹಿಡಿದಿದ್ದಾನೆ. ಆದರೆ ಶಾಲಾ ಶಿಕ್ಷಣ ಇಲಾಖೆ ಅಧಿಕಾರಿಗಳು ಸರ್ಕಾರದ ನಿಯಮದ ಪ್ರಕಾರ ಸದರಿ ಶಾಲೆಯಲ್ಲಿ ಸದ್ಯ ಓದುತ್ತಿರುವ ಮಕ್ಕಳ ಪಾಲಕರಲ್ಲಿ ಒಬ್ಬರನ್ನು ಅಧ್ಯಕ್ಷರಾಗಿ ನೇಮಿಸಲು ಮಾತ್ರ ಅವಕಾಶವಿದೆ ಎಂದು ಹೇಳಿದ್ದಾರೆ.

ಆದರೆ ಪಟ್ಟು ಸಡಿಲಿಸದ ರಾಮನಗೌಡ ಬುಧವಾರ ಏಕಾಏಕಿ ಶಾಲೆಯ ಎಲ್ಲ ಕೋಣೆಗಳು ಹಾಗೂ ಶಾಲಾ ಕಾಂಪೌಂಡ್ ಗೇಟ್ ಗೆ ಬೀಗ ಜಡಿದಿದ್ದಾನೆ. ಇದರಿಂದಾಗಿ ಶಾಲೆಗೆ ಬಂದ ಮಕ್ಕಳು, ಶಿಕ್ಷಕರು ಶಾಲೆಯ ಒಳಗೆ ಹೋಗಲಾಗದೆ ರಸ್ತೆಯಲ್ಲೇ ಕುಳಿತುಕೊಂಡಿರುವುದು ಕಂಡು ಬಂದಿದೆ.

 

 

Share this article

ಟಾಪ್ ನ್ಯೂಸ್