Breaking:

BIG NEWS ಒಲಿಂಪಿಕ್ಸ್ ಪೈನಲ್ ನಿಂದ ಅನರ್ಹಗೊಂಡ ವಿನೇಶ್ ಪೋಗಟ್

ಪ್ಯಾರಿಸ್ ಒಲಿಂಪಿಕ್ಸ್​ನಲ್ಲಿ  50 ಕೆಜಿ ತೂಕ ವಿಭಾಗದ ಕುಸ್ತಿ ಸ್ಪರ್ಧೆಯ ಸೆಮಿಫೈನಲ್ ಪಂದ್ಯದಲ್ಲಿ ಕ್ಯೂಬಾದ ಗುಜ್ಮನ್ ಲೋಪೆಜ್ ಅವರನ್ನು 5-0 ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿದ್ದ ಭಾರತದ ವಿನೇಶ್ ಫೋಗಟ್ ಇದೀಗ ಸ್ಪರ್ಧೆಯಿಂದ ಅನರ್ಹಗೊಂಡಿರುವ ಬಗ್ಗೆ ವರದಿಯಾಗಿದೆ.

ಫೈನಲ್ ಪಂದ್ಯಕ್ಕೂ ಮುನ್ನ ನಡೆದ ವಿನೇಶ್ ಅವರ ತೂಕ ಪರೀಕ್ಷೆಯಲ್ಲಿ  ನಿಗದಿತ ತೂಕಕ್ಕಿಂತ ಅವರು 100 ಗ್ರಾಂ ತೂಕ ಹೆಚ್ಚಿರುವುದು ಪತ್ತೆಯಾಗಿತ್ತು. ಹೀಗಾಗಿ ಅವರು ಫೈನಲ್ ಸ್ಪರ್ಧೆಯಿಂದ ಹೊರಬಿದ್ದಿದ್ದಾರೆ.

ಒಲಿಂಪಿಕ್ಸ್‌ ನಿಯಮದ ಪ್ರಕಾರ ಫೋಗಟ್‌ ಬೆಳ್ಳಿ ಪದಕಕ್ಕೂ ಅರ್ಹರಾಗುವುದಿಲ್ಲ ಹಾಗೂ 50 ಕೆಜಿ ವಿಭಾಗದಲ್ಲಿ ಕೇವಲ ಚಿನ್ನ ಮತ್ತು ಕಂಚಿನ ಪದಕ ವಿಜೇತರಿರಲಿದ್ದಾರೆ.

Share this article

ಟಾಪ್ ನ್ಯೂಸ್