ವಿಟ್ಲ; ಅಪಘಾತದ ಗಾಯಾಳು ಯುವಕ ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.
ಮುಝಂಬಿಲ್ ಮೃತ ಯುವಕ. ಆ.12ರಂದು ವಿಟ್ಲ- ಸಾಲೆತ್ತೂರು ಮುಡಿಪು ರಸ್ತೆಯ ಕಟ್ಟತ್ತಿಲ ಎಂಬಲ್ಲಿ ಮುಝಂಬಿಲ್ ತೆರಳುತ್ತಿದ್ದ ದ್ವಿಚಕ್ರ ವಾಹನಕ್ಕೆ ಬಸ್ ಢಿಕ್ಕಿ ಹೊಡೆದಿತ್ತು. ಅವರನ್ನು ಬಳಿಕ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಇಂದು ಚಿಕಿತ್ಸೆ ಫಲಿಸದೆ ಅವರು ಮೃತಪಟ್ಟಿದ್ದಾರೆ.
ವಿಟ್ಲದಿಂದ ಮುಡಿಪು ಕಡೆ ತೆರಳುತ್ತಿದ್ದ ಬಸ್ ಮುಝಂಬಿಲ್ ತೆರಳುತ್ತಿದ್ದ ಆಕ್ಟಿವಾಗೆ ಢಿಕ್ಕಿ ಹೊಡೆದಿತ್ತು.