ಜೋಡಿಯೊಂದು ಕಾಡಿನಲ್ಲಿ ರೊಮ್ಯಾನ್ಸ್ ಮೂಡಿನಲ್ಲಿದ್ದ ವೇಳೆ ಸಾರ್ವಜನಿಕರಿಗೆ ಸಿಕ್ಕಿಬಿದ್ದ ಘಟನೆ ವಿಟ್ಲ ಸಮೀಪದ ಕಳೆಂಜಿಮಲೆಯಲ್ಲಿ ನಡೆದಿದೆ.
ನಿನ್ನೆ ಸಂಜೆ ಜೋಡಿಯೊಂದು ಕಳೆಂಜಿಮಲೆ ಕಾಡಿಗೆ ಬಂದಿರುವುದು ಸಾರ್ವಜನಿಕರ ಗಮನಕ್ಕೆ ಬಂದಿದೆ. ಹಾಗಾಗಿ ಅವರನ್ನು ಪತ್ತೆಹಚ್ಚಲು ಹೊರಟಾಗ ಜೋಡಿ ರೊಮ್ಯಾನ್ಸ್ ಮೂಡಿನಲ್ಲಿರುವುದು ಕಂಡುಬಂದಿದೆ. ತಕ್ಷಣ ಎಚ್ಚೆತ್ತ ಜೋಡಿ ಸಾರ್ವಜನಿಕರನ್ನು ಕಂಡು ಅರೆಬರೆ ಬಟ್ಟೆಯಲ್ಲೇ ಓಡಿ ಹೋಗಿದ್ದಾರೆ.
ಬಳಿಕ ಅಲ್ಲಿನ ಸ್ಥಳೀಯರು ವಿಟ್ಲ ಪೊಲೀಸರಿಗೆ ಮಾಹಿತಿ ರವಾನಿಸಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ಕಾಡಿನಲ್ಲಿದ್ದ ಬೈಕ್, ಯುವತಿಯ ಬ್ಯಾಗ್, ಮಾತ್ರೆ, ಕಾಂಡೋಮ್, ಚಪ್ಪಲಿಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ತಿಳಿದು ಬಂದಿದೆ.