ವಿಟ್ಲ : ಜನರಲ್ ಸ್ಟೋರ್ ಗೆ ತೆರಳಿದ ಬಾಲಕಿ ಮೇಲೆ ಅಂಗಡಿ ಮಾಲಕನೋರ್ವ ಲೈಂಗಿಕ ದೌರ್ಜನ್ಯ ವೆಸಗಿರುವ ಆರೋಪ ವಿಟ್ಲ ಸಮೀಪದ ಕುದ್ದು ಪದವಿನಿಂದ ಕೇಳಿ ಬಂದಿದೆ.
ಘಟನೆ ಬಗ್ಗೆ ತಿಳಿಯುತ್ತಿದ್ದಂತೆ ಹಿಂದೂ ಜಾಗರಣ ವೇದಿಕೆ ಮುಖಂಡರು ವಿಟ್ಲ ಠಾಣೆಗೆ ಭೇಟಿ ನೀಡಿದ್ದಾರೆ.
ವಿಟ್ಲ ಸಮೀಪದ ಕುದ್ದು ಪದವಿನಲ್ಲಿ ಜನರಲ್ ಸ್ಟೋರ್ ಅಂಗಡಿಗೆ ತೆರಳಿದ್ದ ಅಪ್ರಾಪ್ತ ಬಾಲಕಿಗೆ ಅಂಗಡಿ ಮಾಲಕ ಲೈಂಗಿಕ ದೌರ್ಜನ್ಯ ವೆಸಗಿರುವ ಆರೋಪ ಕೇಳಿ ಬಂದಿದೆ.
ಹಿಂದೂ ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ನರಸಿಂಹ ಮಾಣಿ ಘಟನೆಯನ್ನು ಖಂಡಿಸಿದ್ದು, ಆರೋಪಿಯನ್ನು ತಕ್ಷಣ ಬಂಧಿಸುವಂತೆ ಆಗ್ರಹಿಸಿದ್ದಾರೆ.