ವಿಟ್ಲದ ಉರಿಮಜಲು ಎಂಬಲ್ಲಿ ಹಾಡಹಗಲೇ ರಿಕ್ಷಾ ಚಾಲಕನಿಗೆ ಚೂರಿ ಇರಿತ ಪ್ರಕರಣಕ್ಕೆ ಸಂಬಂಧಿಸಿ ಮಹತ್ವದ ಮಾಹಿತಿ ಲಭ್ಯವಾಗಿದೆ.
ಎಂಎಂಎಸ್ ಆಟೋ ಚಾಲಕ ಶರೀಫ್ ಗೆ ಕಾರ್ಯಡಿ ನಿವಾಸಿ ಆಪೀ ಚೂರಿಯಿಂದ ಇರಿದಿದ್ದ. ಹುಡುಗಿ ವಿಚಾರಕ್ಕೆ ಸಂಬಂಧಿಸಿ ಶರೀಫ್ ಜೊತೆ ತಗಾದೆಯನ್ನು ತೆಗೆದ ಆಫೀ ಬಳಿಕ ಚೂರಿಯಿಂದ ಇರಿದಿದ್ದಾನೆ ಎಂದು ಹೇಳಲಾಗಿದೆ.
ಇಡ್ಕಿದು ಪಂಚಾಯತ್ ಎದುರಲ್ಲಿ ಈ ಘಟನೆ ಸಂಭವಿಸಿತ್ತು. ಗಾಯಗೊಂಡಿರುವ ಶರೀಫ್ ನ್ನು ಸ್ಥಳೀಯರು ಪುತ್ತೂರು ಆಸ್ಪತ್ರೆಗೆ ದಾಖಲಿಸಿದ್ದಾರೆ.
ಸ್ಥಳಕ್ಕೆ ವಿಟ್ಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದರು. ಘಟನೆಗೆ ಸಂಬಂಧಿಸಿ ವಿಟ್ಲ ಠಾಣೆಯಲ್ಲಿ ಪ್ರಕರಣವೂ ದಾಖಲಾಗಿತ್ತು.