ವಯನಾಡಿನ ಭೂ ಕುಸಿತ ಪ್ರದೇಶದಲ್ಲಿ ರಕ್ಷಣಾ ಕಾರ್ಯಕ್ಕೆ ಮಲಯಾಳಂ ಚಿತ್ರರಂಗದ ಖ್ಯಾತ ನಟ ಮೋಹನ್ ಲಾಲ್ ಕೈಜೋಡಿಸಿದ್ದಾರೆ.
ಭಾರತೀಯ ಸೇನೆಯ ಗಡಿ ಭದ್ರತಾ ವಿಭಾಗದ ಲೆಫ್ಟಿನೆಂಟ್ ಕರ್ನಲ್ ಹುದ್ದೆಯ ಗೌರವ ಹೊಂದಿರುವ ಮೋಹನ್ ಲಾಲ್ ಸೇನಾ ಸಮವಸ್ತ್ರದಲ್ಲೇ ಗುಡ್ಡ ಕುಸಿತವಾದ ಸ್ಥಳಕ್ಕೆ ಬಂದು ಯೋಧರಿಂದ ಪರಿಹಾರ ಕಾರ್ಯದ ಮಾಹಿತಿ ಪಡೆದಿದ್ದಾರೆ.
ಬಳಿಕ ಸೇನೆಯ ರಕ್ಷಣಾ ಕಾರ್ಯದಲ್ಲಿ ತಾವು ಕೂಡ ತೊಡಗಿಸಿಕೊಂಡಿದ್ದಾರೆ. ಮೋಹನ್ ಲಾಲ್ ಅವರ ಈ ಕಾರ್ಯಕ್ಕೆ ಎಲ್ಲೆಡೆಯಿಂದ ಮೆಚ್ಚುಗೆ ವ್ಯಕ್ತವಾಗಿದೆ.
ಈಗಾಗಲೇ ವಯನಾಡು ದುರಂತಕ್ಕೆ ಸಂಬಂಧಿಸಿ ಪರಿಹಾರ ಕಾರ್ಯಕ್ಕೆ ಸಿನಿಮಾ ತಾರೆಯರು ದೇಣಿಗೆಯನ್ನು ಕೂಡ ನೀಡಿರುವಂತದ್ದನ್ನು ಕಾಣಬಹುದಾಗಿದೆ.