ಕೇರಳದ ವಯನಾಡು ಹಿಂದೆಯೆಂದೂ ಕಂಡರಿಯದ ಭೀಕರ ದುರಂತಕ್ಕೆ ಸಾಕ್ಷಿಯಾಗಿದೆ. ಹಲವು ಸ್ಟಾರ್ ನಟರು ಪರಿಹಾರ ಕಾರ್ಯಕ್ಕಾಗಿ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ಹಣ ನೀಡಿ ಸಹಾಯ ಮಾಡಿದ್ದಾರೆ.
ಆದರೆ ಮಲಯಾಳಂ ಸಿನಿಮಾದಲ್ಲಿ ಇತ್ತೀಚೆಗೆ ಜನಪ್ರಿಯವಾಗಿರುವ ನಟಿ ನಿಖಿಲಾ ವಿಮಲ್ ಪರಿಹಾರ ಕಾರ್ಯದಲ್ಲಿ ಕಾರ್ಯಕರ್ತರೊಂದಿಗೆ ಸ್ಚಯಂ ತೊಡಗಿಸಿಕೊಂಡಿದ್ದಾರೆ.
ನಿಖಿಲಾ ಪರಿಹಾರ ಕಾರ್ಯದಲ್ಲಿ ತೊಡಗಿಸಿಕೊಂಡಿರುವ ವಿಡಿಯೋಗಳು ಈಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ವಯನಾಡಿನಲ್ಲಿ ದುರಂತಕ್ಕೀಡಾದವರಿಗೆ ಆಹಾರ ಸಾಮಗ್ರಿಗಳನ್ನು ಪೂರೈಸುವುದು, ಅದನ್ನು ಪ್ಯಾಕ್ ಮಾಡುವುದು, ಇತ್ಯಾದಿ ನೆರವು ಕಾರ್ಯ ಮಾಡುವಲ್ಲಿ ನಿಖಿಲಾ ತೊಡಗಿಸಿಕೊಂಡಿದ್ದಾರೆ. ಕಣ್ಣೂರಿನ ತಳಿಪ್ಪರಂಬ ಕಲೆಕ್ಷನ್ ಸೆಂಟರ್ ನಲ್ಲಿ ಡಿವೈಎಫ್ ಐ ನೇತೃತ್ವದಲ್ಲಿ ನಡೆಯುತ್ತಿರುವ ಪರಿಹಾರ ಸಾಮಗ್ರಿ ಸಂಗ್ರಹ ಕಾರ್ಯದಲ್ಲಿ ಅವರು ತೊಡಗಿಸಿಕೊಂಡಿದ್ದಾರೆ. ಅವರ ನಡೆಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.