Breaking:

ವಯನಾಡು ದುರಂತ; ಸಿಎಂ ಪರಿಹಾರ ನಿಧಿಗೆ ಈವರೆಗೆ ಎಷ್ಟು ಹಣ ಜಮೆಯಾಗಿದೆ ಗೊತ್ತಾ?

ಕೇರಳದ ವಯನಾಡಿನ 4 ಗ್ರಾಮಗಳ ವ್ಯಾಪ್ತಿಯಲ್ಲಿ ಜುಲೈ 30ರಂದು ಸಂಭವಿಸಿದ ಭಯಾನಕ ಭೂಕುಸಿತ ದುರ್ಘಟನೆಯಲ್ಲಿ  ಈವರೆಗೆ 413ಕ್ಕೂ ಹೆಚ್ಚು ಮಂದಿ ಬಲಿಯಾಗಿದ್ದು, 152ಕ್ಕೂ ಅಧಿಕ ಜನರು ಇನ್ನೂ  ಪತ್ತೆಯಾಗಿಲ್ಲ.

ದುರಂತದ ಬೆನ್ನಲ್ಲೆ ಮುಖ್ಯಮಂತ್ರಿಗಳ ಸಂಕಷ್ಟ ಪರಿಹಾರ ನಿಧಿಗೆ ಭಾರೀ ಧನಸಹಾಯ ಹರಿದು ಬಂದಿದ್ದವು, ರಾಹುಲ್ ಗಾಂಧಿ, ಕರ್ನಾಟಕದ ಸಿಎಂ ಸಿದ್ದರಾಮಯ್ಯ ಸೇರಿ ವಿವಿಧ ಸಂಘ ಸಂಸ್ಥೆಗಳು ಮನೆ ನಿರ್ಮಾಣದ ಭರವಸೆಯನ್ನು ನೀಡಿದ್ದಾರೆ.  ಸಿನಿಮಾ ನಟ, ನಟಿಯರು, ಉದ್ಯಮಿಗಳು ತಮ್ಮ ಕೈಲಾದಷ್ಟು ನೆರವನ್ನು ನೀಡುತ್ತಿದ್ದಾರೆ.

ಈ ಮಧ್ಯೆ ಸಿಎಂ ಪರಿಹಾರ ನಿಧಿಗೆ 96.58 ಕೋಟಿ ರೂ.ಗಳ ಹಣ ದಾನಿಗಳಿಂದ ನೆರವಿನ ರೂಪದಲ್ಲಿ ಹರಿದು ಬಂದಿದೆ ಎಂದು ವರದಿಯಾಗಿದೆ.

ಇಂದು ಪ್ರಧಾನಿ ನರೇಂದ್ರ ಮೋದಿ ವಯನಾಡು ದುರಂತ ಸ್ಥಳಕ್ಕೆ ಭೇಟಿ ನೀಡಲು ಕೇರಳಕ್ಕೆ ತೆರಳಿದ್ದಾರೆ.

 

Share this article

ಟಾಪ್ ನ್ಯೂಸ್