ವಯನಾಡಿನಲ್ಲಿ ನಡೆದ ಭೀಕರ ಭೂಕುಸಿತದ ಪತ್ತೆ ಹಚ್ಚಲಾಗದ ಮೃತದೇಹಗಳ ಭಾಗಗಳನ್ನು ಸಾಮೂಹಿಕವಾಗಿ ಅಂತ್ಯಕ್ರಿಯೆಯನ್ನು ಇಂದು ಜಿಲ್ಲಾಡಳಿತವು ನಡೆಸಿದೆ.
ಅಪರಿಚಿತ ಸಂತ್ರಸ್ತರ ದೇಹದ ಭಾಗಗಳನ್ನು ಪುತ್ತುಮಲ ಪ್ರದೇಶದಲ್ಲಿ ಸಾಮೂಹಿಕವಾಗಿ ಧಪನ ಮಾಡಲಾಗಿದೆ.
ಸಮಾಧಿ ಕಾರ್ಯಕ್ರಮಕ್ಕೂ ಮುನ್ನ ಎಲ್ಲ ಧರ್ಮದವರ ಪ್ರಾರ್ಥನೆ ನಡೆಸಿ ಅಂತ್ಯಸಂಸ್ಕಾರ ನೆರವೇರಿಸಲಾಯಿತು.
ಈ ಕುರಿತು ಎಎನ್‌ಐ ಜೊತೆ ಮಾತನಾಡಿದ ಕೇರಳ ಸಚಿವ ಕೆ ಎನ್ ಬಾಲಗೋಪಾಲ್, ನಾಪತ್ತೆಯಾದ ದೇಹದ ಭಾಗಗಳ ನಿಖರವಾದ ಸಂಖ್ಯೆಯನ್ನು ನಾವು ನೀಡಲು ಸಾಧ್ಯವಿಲ್ಲ. ಅಪರಿಚಿತ ಶವಗಳಿಗೆ ಸಾಮೂಹಿಕ ಅಂತ್ಯಕ್ರಿಯೆ ನಡೆಯುತ್ತಿದೆ ಎಂದು ಹೇಳಿದ್ದಾರೆ.
ಇನ್ನು ಕೇರಳದ ವಯನಾಡಿನ ಭೂಕುಸಿತ ಪೀಡಿತ ಪ್ರದೇಶಗಳಲ್ಲಿ ರಕ್ಷಣಾ ಮತ್ತು ಪರಿಹಾರ ಕಾರ್ಯಾಚರಣೆ ಇಂದು ಕೂಡ ನಡೆದಿದೆ. ಈವರೆಗೆ 360 ಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿದೆ.