Breaking:

ವಯನಾಡು ಭೂ ಕುಸಿತ ದುರಂತಕ್ಕೆ ಗೋಹತ್ಯೆ ಜೊತೆ ಸಂಬಂಧ ಕಲ್ಪಿಸಿ ವಿವಾದಾತ್ಮಕ ಹೇಳಿಕೆ ನೀಡಿದ ಬಿಜೆಪಿ ನಾಯಕ

ವಯನಾಡು ಭೂಕುಸಿತಕ್ಕೂ ಕೇರಳದ ಗೋಹತ್ಯೆ ಪದ್ಧತಿಗೂ ಸಂಬಂಧ ಕಲ್ಪಿಸಿ  ಬಿಜೆಪಿಯ ಹಿರಿಯ ನಾಯಕ ಜ್ಞಾನದೇವ್ ಅಹುಜಾ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.

ಗೋಹತ್ಯೆ ಎಲ್ಲಿ ನಡೆದರೂ ಇಂತಹ ಘಟನೆಗಳು ನಡೆಯುತ್ತಲೇ ಇರುತ್ತವೆ ಎಂದು ರಾಜಸ್ಥಾನದ ಮಾಜಿ ಶಾಸಕ ಅಹುಜಾ ಹೇಳಿದ್ದಾರೆ.

ಜುಲೈ 30 ರಂದು, ಮುಂಡಕೈ, ಚುರಲಾಮಲ ಮತ್ತು ಮೆಪ್ಪಾಡಿ ಸೇರಿದಂತೆ ವಯನಾಡಿನ ಗ್ರಾಮಗಳಲ್ಲಿ ಅನೇಕ ಭೂಕುಸಿತಗಳು ಸಂಭವಿಸಿದವು. ಕೇರಳದ ವಯನಾಡ್ ಭೂಕುಸಿತದಲ್ಲಿ ಸತ್ತವರ ಸಂಖ್ಯೆ ಶನಿವಾರ 358ಕ್ಕೆ ತಲುಪಿದೆ,.

ವಯನಾಡು ಭೂಕುಸಿತವು ಗೋವಧೆಯ ನೇರ ಪರಿಣಾಮವಾಗಿದ್ದು, ಕೇರಳದಲ್ಲಿ ಈ ಅಭ್ಯಾಸ ನಿಲ್ಲುವವರೆಗೂ ಇಂತಹ ದುರಂತಗಳು ಸಂಭವಿಸುತ್ತಲೇ ಇರುತ್ತವೆ ಎಂದು ಅಹುಜಾ ಅಭಿಪ್ರಾಯಪಟ್ಟಿದ್ದಾರೆ.

ಉತ್ತರಾಖಂಡ ಹಾಗೂ ಹಿಮಾಚಲ ಪ್ರದೇಶದಂತಹ ಪ್ರಾಂತ್ಯಗಳಲ್ಲಿ ಮೇಘ ಸ್ಫೋಟಗಳು ಹಾಗೂ ಭೂಕುಸಿತಗಳು ಪದೇ ಪದೇ ನಡೆಯುತ್ತಿದ್ದರೂ, ಅವು ಇಷ್ಟು ದೊಡ್ಡ ಪ್ರಮಾಣದ ವಿಪತ್ತಿನ ಸ್ವರೂಪ ಪಡೆದುಕೊಂಡಿಲ್ಲ ಎಂದು ಹೇಳಿಕೊಂಡಿದ್ದಾರೆ.

2018ರಿಂದ ಗೋವಧೆಯಲ್ಲಿ ಭಾಗಿಯಾಗಿರುವ ಪ್ರದೇಶಗಳು ಇಂತಹ ದುರಂತ ಘಟನೆಗಳನ್ನು ಎದುರಿಸುತ್ತಿರುವುದನ್ನು ನೋಡುತ್ತಿದ್ದೇವೆ. ಒಂದು ವೇಳೆ ಗೋವಧೆ ಸ್ಥಗಿತಗೊಳ್ಳದಿದ್ದರೆ, ಕೇರಳದಲ್ಲಿ ಇಂತಹ ದುರಂತಗಳು ಮುಂದುವರಿಯಲಿವೆ ಹೇಳಿದ್ದಾರೆ.


Share this article

ಟಾಪ್ ನ್ಯೂಸ್