Breaking:

ವಯನಾಡಿನಲ್ಲಿ ಭೂಕುಸಿತಕ್ಕೆ ಕಾರಣವಾದ ಅಂಶಗಳೇನು? ತಜ್ಞರು ಏನು ಹೇಳುತ್ತಾರೆ ಗೊತ್ತಾ?

ಕೇರಳದ ವಯನಾಡಿನ ಮೇಪ್ಪಾಡಿಯಲ್ಲಿ ಸಂಭವಿಸಿದ ಸರಣಿ ಭೂಕುಸಿತದಿಂದ ಸಾವನ್ನಪ್ಪಿದವರ ಸಂಖ್ಯೆ 300ಕ್ಕೆ ತಲುಪಿದೆ,  ಸ್ಥಳದಲ್ಲಿ 240 ಜನರು ಇನ್ನೂ ನಾಪತ್ತೆಯಾಗಿದ್ದಾರೆ. ಭೂಕುಸಿತಗಳು  ಜೀವ ಮತ್ತು ಜೀವನೋಪಾಯಕ್ಕೆ ಅಪಾರ ನಷ್ಟವನ್ನುಂಟು ಮಾಡುತ್ತದೆ.

ಭೂಕುಸಿತದ ಬಗ್ಗೆ ಮಾತನಾಡಿದ ಕೊಚ್ಚಿ ವಿಜ್ಞಾನ ಮತ್ತು ತಂತ್ರಜ್ಞಾನ ವಿಶ್ವವಿದ್ಯಾನಿಲಯದ ಅಡ್ವಾನ್ಸ್ಡ್ ಸೆಂಟರ್ ಫಾರ್ ಅಟ್ಮಾಸ್ಫಿಯರಿಕ್ ರೇಡಾರ್ ರಿಸರ್ಚ್ (ACARR) ನಿರ್ದೇಶಕ ಎಸ್ ಅಭಿಲಾಷ್, ತೋಟಗಳನ್ನು ಮಾಡಲು ಮರಗಳನ್ನು ಕಡಿಯುವುದು ಕೇರಳದಲ್ಲಿ ಭೂಕುಸಿತಕ್ಕೆ ಕೊಡುಗೆ ನೀಡುತ್ತಿದೆ. ಕೇರಳದಲ್ಲಿ ನಡೆಯುತ್ತಿರುವ ಹೆಚ್ಚಿನ ಭೂಕುಸಿತಗಳು ತೋಟದ ಪ್ರದೇಶಗಳಲ್ಲಿ ನಡೆಯುತ್ತವೆ. ಇದು ಮತ್ತೊಂದು ಪ್ರಮುಖ ಪ್ರಚೋದಕ ಅಂಶವನ್ನು ಸೂಚಿಸುತ್ತದೆ. ಏಕ ಕೃಷಿಯಂತಹ ಕೃಷಿ ಚಟುವಟಿಕೆಗಳು, ಇದರಲ್ಲಿ ದೊಡ್ಡ, ಸ್ಥಳೀಯ ಮರಗಳು, ನೆಲದ ಮೇಲೆ ಮಣ್ಣನ್ನು ಹಿಡಿದಿಟ್ಟುಕೊಳ್ಳುತ್ತವೆ. ಈ ಮರಗಳನ್ನು ತೋಟದ ಬೆಳೆಗಳಾದ ಟೀ ಮತ್ತು ಕಾಫಿ ಬೆಳೆಗಾಗಿ ಕಡಿಯಲಾಗುತ್ತವೆ. ಇಂಥಾ ಚಿಕ್ಕ ಗಿಡಗಳು ಆಳವಿಲ್ಲದ ಬೇರುಗಳನ್ನು ಹೊಂದಿವೆ ಎಂದು ಹೇಳಿದ್ದಾರೆ.

ಈ ವಾರದ ಭೂಕುಸಿತ ಸಂಭವಿಸಿದ ಸ್ಥಳಕ್ಕೆ ಸಮೀಪವಿರುವ ಪುತ್ತುಮಲದಲ್ಲಿ ಡಾ.ಅಭಿಲಾಷ್ ಮತ್ತು ಅವರ ತಂಡವು 2019 ರಲ್ಲಿ ನಡೆಸಿದ ಭೂಕುಸಿತದ ಸಾಧ್ಯತೆ ಸಂಶೋಧನೆಯು ಕೆಲವು ವಾತಾವರಣದ ಪರಿಸ್ಥಿತಿಗಳು ಅತಿ ಹೆಚ್ಚು ಮಳೆಗೆ ಗುರಿಯಾಗುವಂತೆ ಮಾಡಿದೆ ಎಂದು ಕಂಡುಹಿಡಿದಿದೆ.

ವಾರಗಳ ಕಾಲ ಸುರಿದ ಮಳೆ ಸಾಮಾನ್ಯಕ್ಕಿಂತ 50-70%, ವಯನಾಡಿನಲ್ಲಿ ದುರಂತದ ಪರಿಸ್ಥಿತಿಗಳನ್ನು ಉಂಟು ಮಾಡಿದೆ. ಈ ಮಳೆಯು ಮೇಲ್ಮಣ್ಣನ್ನು ಸ್ಯಾಚುರೇಟೆಡ್ ಮಾಡಿದೆ. ಒಂದು ಸಣ್ಣ ಮೇಘ ಸ್ಫೋಟದಂತಹ ಅತ್ಯಂತ ಭಾರೀ ಮಳೆಯು ದಿನವಿಡೀ ಸುರಿದ್ದಿದ್ದರಿಂದ, ಭೂಕುಸಿತದ ಘಟನೆಗೆ ಕಾರಣವಾಗಿದೆ ಎಂದು ಹೇಳಲಾಗಿದೆ.

Share this article

ಟಾಪ್ ನ್ಯೂಸ್