ಕೇರಳದ ವಯನಾಡ್ ಜಿಲ್ಲೆಯ ಮುಂಡಕ್ಕೈ ಕುಗ್ರಾಮದಲ್ಲಿ ಭೂಕುಸಿತದಿಂದ ಮೃತರ ಸಂಖ್ಯೆ 276ಕ್ಕೆ ಏರಿಕೆಯಾಗಿದೆ. ಈ ಮಧ್ಯೆ ಘಟನಾ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ ಹಲವು ಹೃದಯ ವಿದ್ರಾಹಕ ದೃಶ್ಯಗಳು ಕಂಡು ಬಂದಿದೆ.
ಭೂಕುಸಿತಕ್ಕೆ ನಾಶವಾದ ಮನೆಗಳ ಒಳಗೆ ಕುಳಿತಿರುವ ಮತ್ತು ಮಲಗಿರುವ ಸ್ಥಿತಿಯಲ್ಲಿ ಮೃತದೇಹಗಳ ಭಯಾನಕ ದೃಶ್ಯಗಳು ಕಂಡುಬಂದಿದೆ.
ಭೂಕುಸಿತ ಸಂಭವಿಸಿದ ಸ್ಥಳದಲ್ಲಿ ಸೇನೆಯ ಸಿಬ್ಬಂದಿ ಸಂಪೂರ್ಣವಾಗಿ ಮಣ್ಣಿನಲ್ಲಿ ಮುಳುಗಿದ್ದ ಮನೆಯ ಮೇಲ್ಛಾವಣಿಯನ್ನು ಮುರಿದು ಒಳಗೆ ಪ್ರವೇಶಿಸಲು ಹಗ್ಗಗಳನ್ನು ಬಳಸಿ ಅಲ್ಲಿ ಸಿಕ್ಕಿಬಿದ್ದವರ ಶವಗಳನ್ನು ಹೊರತೆಗೆಯುವುದು ಕಂಡು ಬಂದಿದೆ.
ಅಂತಹ ಒಂದು ಮನೆಯೊಳಗೆ ಹೋದ ಸ್ಥಳೀಯ ವ್ಯಕ್ತಿಯೊಬ್ಬರು, ಕುರ್ಚಿಗಳ ಮೇಲೆ ಕುಳಿತುಕೊಂಡ ಮತ್ತು ಮಂಚಗಳ ಮೇಲೆ ಮಲಗಿರುವ ಸ್ಥಿತಿಯಲ್ಲಿ ಮಣ್ಣಿನಿಂದ ಆವೃತವಾದ ದೇಹಗಳನ್ನು ಕಂಡುಕೊಂಡಿರುವುದಾಗಿ ಹೇಳಿದ್ದಾರೆ.