Breaking:

ವಯನಾಡಿನಲ್ಲಿ ಮತ್ತೆ ಕೇಳಿಸಿದ ಭಾರೀ ಶಬ್ಧ; ಶಾಲೆಗಳಿಗೆ ರಜೆ ಘೋಷಣೆ, ಆತಂಕದಲ್ಲಿ ಜನ

ವಯನಾಡ್‌ನ ಎಡಕ್ಕಲ್‌ನಲ್ಲಿ ಭಾರೀ ಶಬ್ಧ ಕೇಳಿ ಬಂದಿದ್ದು, ಭೂಕಂಪದ ಸಾಧ್ಯತೆಯಿರುವುದರಿಂದ ಜನರನ್ನು ಸ್ಥಳಾಂತರ ಮಾಡಿರುವ ಬಗ್ಗೆ ವರದಿಯಾಗಿದೆ.

ವಯನಾಡಿನ ಕುರಿಚಿಯರ್ಮಲ, ಪಿನಂಗೋಡ್, ಮೋರಿಕಪ್ಪ್, ಅಂಪುಕುತಿಮ್ಮಲ, ಎಡಕ್ಕಲ್ ಗುಹೆ ಪ್ರದೇಶಗಳಲ್ಲಿ ವಾಸಿಸುತ್ತಿರುವರನ್ನು ಸ್ಥಳಾಂತರ ಮಾಡಬೇಕೆಂದು ಸೂಚಿಸಲಾಗಿದೆ.

ಎಡಕ್ಕಲ್ ಮತ್ತು ನೆನ್ಮೇನಿಯಲ್ಲಿ ಭಾರಿ ಶಬ್ದ ಕೇಳಿದ್ದಾಗಿ ಸ್ಥಳೀಯರು ಹೇಳಿದ್ದಾರೆ. ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ತೆರಳಿ ಪರಿಸ್ಥಿತಿಯನ್ನು ಅವಲೋಕಿಸಿದ್ದಾರೆ.

ಭಾರಿ ಶಬ್ದ  ಕೇಳಿ ಬಂದ ಹಿನ್ನೆಲೆ ಈ ಪ್ರದೇಶದಲ್ಲಿ ಶಾಲೆಗಳನ್ನು ಈ ಮುಚ್ಚಲಾಗಿದೆ.

ಕೇರಳ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಕೆಎಸ್‌ಡಿಎಂಎ) ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಲಾಖೆಯು ಭೂಕಂಪನದ ಬಗ್ಗೆ ಪರಿಶೀಲಿಸುತ್ತಿದೆ ಎಂದು ಹೇಳಿದೆ.

Share this article

ಟಾಪ್ ನ್ಯೂಸ್