ಕೇರಳ, ಕರ್ನಾಟಕ ಸೇರಿ ಒಟ್ಟು 6 ರಾಜ್ಯಗಳ ಪಶ್ಚಿಮಘಟ್ಟಗಳನ್ನು ಸೂಕ್ಷ್ಮ ಪ್ರದೇಶ ಎಂದು ಘೋಷಿಸಿ ಕೇಂದ್ರ ಸರಕಾರ ಕರಡು ಅಧಿಸೂಚನೆಯನ್ನೂ ಹೊರಡಿಸಿದೆ.
ಕೇರಳದ 9,993 ಚದರ ಕಿ.ಮೀ ಪಶ್ಚಿಮಘಟ್ಟ ಪ್ರದೇಶ, ಕರ್ನಾಟಕ, ಗೋವಾ, ತಮಿಳುನಾಡು, ಮಹಾರಾಷ್ಟ್ರ, ಗುಜರಾತ್ ರಾಜ್ಯಗಳ ಪಶ್ಚಿಮಘಟ್ಟಗಳನ್ನು ಪರಿಸರ ಸೂಕ್ಷ್ಮ ಪ್ರದೇಶ ಎಂದು ಕೇಂದ್ರ ಸರ್ಕಾರ ಗುರುತಿಸಿದೆ.
ಒಟ್ಟು 56 ಸಾವಿರದ 825 ಚದರ ಕಿ.ಮೀ ಪರಿಸರ ಸೂಕ್ಷ್ಮ ಪ್ರದೇಶ ಎಂದು ಕರಡು ಅಧಿಸೂಚನೆ ಹೊರಡಿಸಿದ ಕೇಂದ್ರ ಸರ್ಕಾರ, ಈ ಬಗ್ಗೆ ಮುಂದಿನ 60 ದಿನದಲ್ಲಿ ತಕರಾರು-ಸಲಹೆ ನೀಡಲು ಸಮಯವನ್ನು ಕೂಡ ಕೊಟ್ಟಿದೆ.
ಕೇಂದ್ರದ ಘೋಷಣೆಯಿಂದ ಈ ಪ್ರದೇಶಗಳಲ್ಲಿ ಇನ್ನು ಮುಂದೆ ಮರಳುಗಾರಿಕೆ, ಕಲ್ಲು ಗಣಿಗಾರಿಕೆ ಸಂಪೂರ್ಣ ನಿಷೇಧವಾಗಲಿದೆ. ಈಗ ಗಣಿಗಾರಿಕೆ ನಡೆಸುತ್ತಿರುವ ಗುತ್ತಿಗೆ ಅವಧಿ ಮುಗಿದರೂ ಆ ಕ್ಷಣವೇ ಗಣಿಗಾರಿಕೆ ಸ್ಥಗಿತಗೊಳಿಸಬೇಕು. ಉಷ್ಣ ವಿದ್ಯುತ್ ಸ್ಥಾವರ, ಕೈಗಾರಿಕೆ ಸ್ಥಾಪಿಸುವಂತಿಲ್ಲ. ಅಕ್ರಮ ರೆಸಾರ್ಟ್, ಹೋಂ ಸ್ಟೇಗಳಿದ್ರೂ ತೆರವಾಗಬೇಕು. ಅಧಿಸೂಚನೆ ಹೊರಡಿಸಿದ 5 ವರ್ಷಗಳಲ್ಲಿ ಈ ಆದೇಶ ಸಂಪೂರ್ಣವಾಗಿ ಜಾರಿ ಆಗಬೇಕಿದೆ.