Breaking:

ಯುವಕನ ಹೊಟ್ಟೆಯಲ್ಲಿ ಕಾಣಿಸಿಕೊಂಡ ಹಾವಿನ ರೀತಿಯ ಹುಳ; ವೈದ್ಯರು ಶಾಕ್

ಯುವಕನೋರ್ವನ ಹೊಟ್ಟೆಯಿಂದ ಹಾವಿನ ರೀತಿಯ ಅಪಾಯಕಾರಿ ಹುಳವನ್ನು ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದಿದ್ದಾರೆ.

ರಾಜಸ್ಥಾನದ ಕುಚ್ಮಾನ ನಗರದ ಆಸ್ಪತ್ರೆಯೊಂದರ ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿ ಯುವಕನ ಹೊಟ್ಟೆಯಿಂದ 30 ಸೆಂಟಿಮೀಟರ್ ಉದ್ದದ ಅಪಾಯಕಾರಿ ಹುಳು ಹೊರ ತೆಗೆದಿದ್ದಾರೆ.

ಶಸ್ತ್ರಚಿಕಿತ್ಸೆ ಬಳಿಕ ಯುವಕ ಆರೋಗ್ಯವಾಗಿದ್ದು, ವಿಶ್ರಾಂತಿ ಪಡೆದುಕೊಳ್ಳುತ್ತಿದ್ದಾನೆ ಎಂದು ವೈದ್ಯರು ಮಾಹಿತಿ ನೀಡಿದ್ದಾರೆ.

30 ವರ್ಷದ ಯುವಕ ಹಲವು ದಿನಗಳಿಂದ ಹೊಟ್ಟೆನೋವಿನಿಂದ ಬಳಲುತ್ತಿದ್ದನು. ಈ ಸಮಸ್ಯೆ ನಿವಾರಣೆಗಾಗಿ ಹಲವು ಔಷಧಿಯನ್ನು ಮಾಡಿದ್ದನು. ಆದರೆ ಗುಣವಾಗಿರಲಿಲ್ಲ. ಇದರಿಂದ ಸ್ಥಳೀಯ ವೈದ್ಯರು ಸೋನೋಗ್ರಾಫಿ ನಡೆಸಿದ್ದರು.

ಸೋನೋಗ್ರಾಫಿಯಲ್ಲಿ ಯುವಕನ ಸಣ್ಣ ಕರುಳಿನಲ್ಲಿ ಹಾವಿನ ರೀತಿಯ ದಪ್ಪವಾದ ಹುಳು ಕಾಣಿಸಿಕೊಂಡಿತ್ತು. ಮರುದಿನವೇ ವೈದ್ಯರು ಅಲ್ಬೆಂಡ್‌ಜೋಲ್ ನೀಡಿ 30 ಸೆಂಟಿ ಮೀಟರ್ ಉದ್ದದ ಹುಳು ಹೊರ ತೆಗೆದಿದ್ದಾರೆ.

ಇದು ಮೊದಲ ಪ್ರಕರಣವೇನು ಅಲ್ಲ. ಈ ಹಿಂದೆಯೂ ಇಂತಹ ಪ್ರಕರಣಗಳು ದಾಖಲಾಗಿವೆ ಎಂದು ವೈದ್ಯರು ಹೇಳಿದ್ದಾರೆ. ಕೆಲ ಮಕ್ಕಳು ಬಾಲ್ಯದಲ್ಲಿ ಮಣ್ಣು ತಿನ್ನುವ ಅಭ್ಯಾಸ ಮಾಡಿಕೊಂಡಿರುತ್ತವೆ. ಕೆಲ ಮಕ್ಕಳು ಸ್ವಚ್ಛವಾಗಿ ಕೈ ತೊಳೆಯದೇ ಆಹಾರ ಸೇವಿಸಿರುತ್ತವೆ. ಈ ಕಾರಣದಿಂದ ಹೊಟ್ಟೆಯಲ್ಲಿ ಹುಳುಗಳ ರಚನೆಯಾಗಿ ಅದು ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಸಿರು ತರಕಾರಿ ಮತ್ತು ಹಣ್ಣುಗಳನ್ನು ಸ್ವಚ್ಛಗೊಳಿಸದೆ ಸೇವನೆ ಮಾಡೋದರಿಂದ ಇಂತಹ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ ಎಂದು ವೈದ್ಯರು ಹೇಳಿದ್ದಾರೆ.

Share this article

ಟಾಪ್ ನ್ಯೂಸ್